Index   ವಚನ - 529    Search  
 
ಜೀವನ ಬುದ್ಧಿ ಪರಮನ ಬುದ್ಧಿಯಿರಬೇಕೆಂದೆಂಬರು, ಇದು ಶಿವಶರಣರ ಗುಣವೆ?, ಲೋಕದ ಅಜ್ಞಾನಿಗಳ ಗುಣವಲ್ಲದೆ? ಎರಡು ಚಿತ್ತವುಳ್ಳವ ಭಕ್ತನೆ? ಎರಡು ಬುದ್ಧಿವುಳ್ಳವ ಮಹೇಶ್ವರನೆ? ಎರಡು ಅಹಂಕಾರವುಳ್ಳವ ಪ್ರಸಾದಿಯೆ? ಎರಡು ಮನವುಳ್ಳವ ಪ್ರಾಣಲಿಂಗಿಯೆ? ಎರಡರಿವು ಉಳ್ಳವ ಶರಣನೆ? ಎರಡು ಭಾವವುಳ್ಳವ ಲಿಂಗೈಕ್ಯನೆ? ಎರಡೆರಡೆಂಬ ಜೀವಭಾವವನಳಿದು ಶಿವಭಾವಸಂಪನ್ನನಾದ ಏಕೋಭಾವಿ ನಿಮ್ಮ ಮಾಹೇಶ್ವರನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.