Index   ವಚನ - 532    Search  
 
ಇಷ್ಟಲಿಂಗಾರ್ಪಣವಾವುದು, ಪ್ರಾಣಲಿಂಗಾರ್ಪಣವಾವುದು, ಭಾವಲಿಂಗಾರ್ಪಣವಾವುದುಯೆಂದರೆ ಹೇಳಿಯೆ ಕೇಳಿರಯ್ಯ. ಇಷ್ಟಲಿಂಗಕ್ಕೆ ಶರೀರವೆ ಸಮರ್ಪಣ. ಪ್ರಾಣಲಿಂಗಕ್ಕೆ ಮನವೆ ಸಮರ್ಪಣ. ಭಾವಲಿಂಗಕ್ಕೆ ತೃಪ್ತಿಯೆ ಸಮರ್ಪಣ. ಶರೀರವೆಂದರೆ ರೂಪು, ಮನವೆಂದರೆ ರುಚಿ, ತೃಪ್ತಿಯೆಂದರೆ ಸಂತೋಷ. ಈ ತೆರನನರಿದು ಲಿಂಗಕ್ಕೆ ಸಮರ್ಪಿಸಿ ಪ್ರಸಾದವ ಭೋಗಿಸಬಲ್ಲಾತನೇ ಶುದ್ಧಸಿದ್ಧಪ್ರಸಿದ್ಧ ಪ್ರಸಾದಿಯೆಂದು ಹೇಳಲ್ಪಟ್ಟಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.