Index   ವಚನ - 543    Search  
 
ದ್ವಾದಶದಳ ಮಂಟಪದಲ್ಲಿ ರವಿ, ಶಶಿ, ಶಿಖಿಯ ಪೀಠದಲ್ಲಿ ಶಶಿವದನೆ ವಿಶ್ವತೋಮುಖವಾಗಿದ್ದಾಳೆ ನೋಡಾ. ಶಶಿಮುಖಿಯ ಸಂಗದಿಂದ ಪಶುಪತಿಯ ನೆರೆದು ವಿಶ್ವತೋಮುಖ ಪ್ರಸಾದಿಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.