Index   ವಚನ - 555    Search  
 
ಕಾಯವೆಂಬ ಕೆರೆಗೆ, ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ, ದೃಢವೆಂಬ ತೂಬನಿಕ್ಕಬೇಕಯ್ಯ. ಆನಂದವೆಂಬ ಜಲವ ತುಂಬಿ, ಸ್ವಾನುಭಾವವೆಂಬ ಸೋಪಾನವ ಮಾಡಬೇಕಯ್ಯ. ಆ ಕೆರೆಯ ಏರಿಯ ಮೇಲೆ, ಆಚಾರವೆಂಬ ವೃಕ್ಷವ ಬೆಳೆಸಿ, ಅರುಹೆಂಬ ಹೂವ, ಅದ್ವೈತವೆಂಬ ಹಸ್ತದಿಂದ ಕುಯಿದು ಅನುಪಮಲಿಂಗಕ್ಕೆ, ಪೂಜಿಸಬಲ್ಲರೆ ಲಿಂಗಾರ್ಚಕರೆಂಬೆ. ಈ ಭೇದವನರಿಯದೆ, ಹುಸಿಯನೆ ಪೂಜಿಸಿ, ಗಸಣೆಗೊಳಗಾದ ಪಿಸುಣಿಗಳ ಲಿಂಗಪೂಜಕರೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

C-385 

  Tue 31 Oct 2023  

 Super
  Dinesh
Karnataka