Index   ವಚನ - 563    Search  
 
ಉದಯ ಮುಖದ ಜ್ಯೋತಿ ಶರೀರತ್ರಯವ ನುಂಗಿತ್ತು. ಮಧ್ಯಾಹ್ನ ಮುಖದ ಜ್ಯೋತಿ ಮಲತ್ರಯಂಗಳ ನುಂಗಿತ್ತು. ಅಸ್ತಮಯ ಮುಖದ ಜ್ಯೋತಿ ಅಹಂಕಾರತ್ರಯಂಗಳ ನುಂಗಿತ್ತು. ಈ ಮೂರು ಪ್ರಕಾರದ ಜ್ಯೋತಿಯ ಅಖಂಡ ಜ್ಞಾನಜ್ಯೋತಿ ನುಂಗಿತ್ತು. ಅಖಂಡ ಜ್ಞಾನಜ್ಯೋತಿ ಅವಿರಳ ಬ್ರಹ್ಮವನೆಯಿದಿ ನುಂಗಿ ಅಲ್ಲಿಯೆ ಅಡಗಿತ್ತು. ಅದು ಅಡಗಿದಲ್ಲಿ ತಾನಡಗಿದಾತನೇ ಶಿವಯೋಗಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.