Index   ವಚನ - 565    Search  
 
ವಾರಣದ ತಲೆಯನೊಡೆದು ಉತ್ತುಂಗರಾಸಿಯೆಂಬ ಭಕ್ತ್ಯಂಗನೆ ಉದಯವಾದಳು ನೋಡಾ. ಭಕ್ತ್ಯಂಗನೆಯ ಬಸುರೆಲ್ಲಾ ನಿತ್ಯ ನಿರ್ಮಲಜ್ಯೋತಿ. ಸತ್ಯಜ್ಞಾನಮನಂತಂಬ್ರಹ್ಮವನೆಯಿದಿ ನುಂಗಿ ಉಗುಳಲಾರದೆ ಅಲ್ಲಿಯೇ ಸತ್ತಿತ್ತು ನೋಡಾ. ತಾ ಸತ್ತ ಬಳಿಕ ಇನ್ನೆತ್ತಳ ತತ್ವಾತತ್ವ ವಿಚಾರ ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.