Index   ವಚನ - 589    Search  
 
ಜೀವ ಪವನನ ಬೆರಸಿದ ಪ್ರಾಣನ ನಿಲವು ಹೊಗೆ ಸುತ್ತಿದ ಉರಿಯಂತಿದೆ ನೋಡಾ. ಹೊಗೆಯ ಕಳೆದು ಚಿದಾಗ್ನಿಯ ಬಲೆಗೊಳಬಲ್ಲರೆ ಜಗದೊಡೆಯ ತಾನು ತಾನಲ್ಲದೆ ಬೇರಿಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.