Index   ವಚನ - 598    Search  
 
ಸೂಕ್ಷ್ಮನಾಳದಲ್ಲಿ ಶುಭ್ರಮೂರ್ತಿಯ ಕಂಡೆನಯ್ಯ. ಲೋಕಾಧಿಲೋಕದೊಳು ಏಕೋಭರಿತನಾಗಿ ಸರ್ವ ಸಾಕ್ಷಿಕನಾಗಿದಾನೆ ನೋಡಿರಯ್ಯ. ಆಕಾರವಳಿದು ನಿರಾಕಾರಮಯವಾಗಲು ಲೋಕೇಶ ತಾನು ತಾನಾದ ಲಿಂಗೈಕ್ಯನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.