Index   ವಚನ - 608    Search  
 
ಬ್ರಹ್ಮಾಂಡಲೋಕ ಹುಟ್ಟದತ್ತತ್ತ ಮುನ್ನಿನ ನಿಭ್ರಾಂತನ ನೆಮ್ಮಿ ತೋರಿದ ಲೀಲಾಸೂತ್ರ ಮಾತ್ರದಿಂದ ನೀನು ಹಲವಾದುದ ನಾನು ಕಂಡೆನಯ್ಯ. ಲೀಲಾಸೂತ್ರ ಮಾತ್ರದ ಕಾಲ ಕೀಲನು ಕಳೆದು ಮುನ್ನಿನ ನಿಭ್ರಾಂತನ ನೆರೆದು ನಿತ್ಯ ನಿರಂಜನ ಶಿವಯೋಗಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.