Index   ವಚನ - 626    Search  
 
ತನುವ ನೀವು ಸೋಂಕಿ ತನು ನಷ್ಟವಾಯಿತ್ತಯ್ಯ. ಮನವ ನೀವು ಸೋಂಕಿ ಮನ ನಷ್ಟವಾಯಿತ್ತಯ್ಯ. ಭಾವವ ನೀವು ಸೋಂಕಿ ಭ್ರಮೆ ನಷ್ಟವಾಯಿತ್ತಯ್ಯ. ಅರುಹೆ ನೀವಾದಿರಿಯಾಗಿ ಮರಹು ನಷ್ಟವಾಗಿ ಹೋಯಿತ್ತಯ್ಯ. ಮರಹು ಅಳಿಯಿತ್ತಾಗಿ ಮಾಯೆಯಳಿದು ಹೋಯಿತ್ತಯ್ಯ. ಮಾಯೆಯಳಿಯಿತ್ತಾಗಿ ನಿರಾಳ ನಿರ್ಮಾಯ [ಪರಾ] ಪರವಸ್ತುವಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.