Index   ವಚನ - 625    Search  
 
ತನುತ್ರಯಂಗಳು ಸದ್ರೂಪವಪ್ಪ ಗುರುವಿನಲ್ಲಡಗಿ ತನು ನಿರ್ವಯಲಾಯಿತ್ತು. ಮನತ್ರಯಂಗಳು ಚಿದ್ರೂಪವಪ್ಪ ಲಿಂಗದಲ್ಲಿ ಅಡಗಿ ಮನ ನಿರ್ವಯಲಾಯಿತ್ತು. ಧನವೆಂದರೆ ಅರ್ಥ, ಅರ್ಥವೆಂದರೆ ಜೀವಾತ್ಮ. ಜೀವಾತ್ಮ, ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯಂಗಳು ಪರಮಾನಂದವೆಂಬ ಜಂಗಮದಲ್ಲಡಗಿ ಏಕಾರ್ಥವಾದವಾಗಿ ಧನ ನಿರ್ವಯಲಾಯಿತ್ತು. ಈ ಸಚ್ಚಿದಾನಂದ ನಿತ್ಯ ಪರಿಪೂರ್ಣ ನಿರಾಕಾರ ಪರವಸ್ತುವಿನಲ್ಲಡಗಿತ್ತಾಗಿ ಲಿಂಗೈಕ್ಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.