Index   ವಚನ - 630    Search  
 
ಉತ್ತರ ಲೋಕದಲ್ಲಿ ಸತ್ಯಜ್ಞಾನಾನಂದವೆಂಬ ಅಂಗನೆ ಮೃತ್ಯುಲೋಕವನೆಯ್ದಲು ಆ ಶಕ್ತಿಯರ ಕೃತ್ಯಾಕೃತ್ಯಂಗಳು ಕೆಟ್ಟು ಆ ಲೋಕವೆಲ್ಲಾ ಭಕ್ತಿ ಸಾಮ್ರಾಜ್ಯವಾಯಿತ್ತು ನೋಡಾ. ಶಕ್ತಿ ಭಕ್ತಿಯೆಂಬ ಸತ್ಕೃತ್ಯ ನಷ್ಟವಾಗಿ ಮುಕ್ತ್ಯಂಗನೆಯ ಮುಖವ ನೋಡುತ್ತ ನೋಡುತ್ತ ಸಚ್ಚಿದಾನಂದೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.