Index   ವಚನ - 631    Search  
 
ಶುದ್ಧ ಸತ್ಕುಲಜಂಗೆ ಅಃಕ್ಕುಲಿಜೆಯ ಸಂಗದಿಂದ ಸತ್ಕುಲ ಕೆಟ್ಟು ಅಃಕ್ಕುಲಜನಾಗಿ ಹುಟ್ಟುತ್ತ ಹೊಂದುತ್ತಿಹುದ- ನಿದನಾರು ಮಾಡಿದರೋ ಎಂದು ಆರೈದು ನೋಡಿ ಮಾರಾರಿಯ ಕೃತಕವೆಂದರಿಯಲಾ ಸತ್ಕುಲಜನ ತಾಯಿ ಅಃಕ್ಕುಲಿಜೆಯ ಕೊಂದು ಸುಪುತ್ರನ ನುಂಗಿ ತತ್ವಮಸಿವಾಕ್ಯದಿಂದತ್ತತ್ತಲಾದವನ ನೆತ್ತಿಯಲ್ಲಿ ಹೊತ್ತು ನೆರೆಯಲು ಭಕ್ತಿ ನಿಃಪತಿಯಾಯಿತ್ತು. ಸತ್ಯವಿಲ್ಲ, ಎನಗೊಂದು ಸಹಜವಿಲ್ಲ. ಗುರು ಲಿಂಗ ಜಂಗಮವೆಂಬ ಮಿಥ್ಯದ ಮಾತೆಲ್ಲಿಯದೋ ಮೂರೊಂದಾಗಿ ಬೆರೆದ ನಿರಾಳಕ್ಕೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ ನಾಮವೆಲ್ಲಿಯದೋ ನಿರ್ನಾಮಂಗೆ? ಬಿಡಾ ಮರುಳೆ.