Index   ವಚನ - 633    Search  
 
ಕಾಯವಿಲ್ಲದ ಭಕ್ತ, ಜೀವವಿಲ್ಲದ ಭಕ್ತ. ಮಾಯೆಯಿಲ್ಲದ ಭಕ್ತ, ಮರಹಿಲ್ಲದ ಭಕ್ತ, ಅರುಹಿಲ್ಲದ ಭಕ್ತ. ಒಳಗಿಲ್ಲದ ಭಕ್ತ, ಹೊರಗಿಲ್ಲದ ಭಕ್ತ. ತಾನಿಲ್ಲದ ಭಕ್ತ, ಇದಿರಿಲ್ಲದ ಭಕ್ತ. ತಾನಿದಿರೆಂಬುವುದೇನುಯೇನೂಯಿಲ್ಲದ ಪರಮನಲ್ಲಿ ಬೆರಸಿ ಬೇರಿಲ್ಲದ ಪರಮ ಭಕ್ತನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.