Index   ವಚನ - 643    Search  
 
ಸಟ್ಟುಗ ಸವಿಯಬಲ್ಲುದೇ? ಅಟ್ಟ ಮಡಕೆ, ಉಣಬಲ್ಲುದೇ ಅಯ್ಯ? ಬಟ್ಟಬಯಲು, ಕಟ್ಟುಕುಟ್ಟಿಗೊಳಗಾಗಬಲ್ಲುದೇ? ನಿಷ್ಠ ಹೀನರಿಗೆ ಲಿಂಗ, ಕಟ್ಟಳೆಗೆ ಬರಬಲ್ಲುದೇ? ಕರ ಕಷ್ಟರಿರಾ ಸುಮ್ಮನಿರಿ ಭೋ. ಕಟ್ಟಳೆಗೆಯ್ದದ ಮಹಾಘನದಲ್ಲಿ ಮನಮುಟ್ಟಿ ಹಿಮ್ಮೆಟ್ಟದೆ ಅಡಗಿದಾತನೇ, ಅಚಲಿತ ಮಾಹೇಶ್ವರನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.