Index   ವಚನ - 670    Search  
 
ಮಳೆಹುಯ್ದರಾಕಾಶ ನೆನೆವುದೇ? ಬಿರುಗಾಳಿ ಬೀಸಿದರಾಕಾಶ ನೋವುದೇ? ಕಿತ್ತಲಗಿನಿಂದಿರಿದರೆ ಆಕಾಶ ಹರಿವುದೇ? ಬಚ್ಚಬರಿಯ ಬಯಲು ಕಟ್ಟು ಕುಟ್ಟಿಗೊಳಗಾಗಬಲ್ಲುದೇ? ನಿಶ್ಚಿಂತ ನಿರಾಳನಾದ ನಿಜೈಕ್ಯನ, ತಥ್ಯಮಿಥ್ಯದಿಂದ ನುಡಿವ ತುಶ್ಚರ ನುಡಿ ತಟ್ಟಬಲ್ಲುದೇ ವಸ್ತುವ ವಾಕುಶಾಸ್ತ್ರ ಖಂಡಿಸಬಲ್ಲುದೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.