ನಿತ್ಯ ತೃಪ್ತನಿಗೆ ಹಸಿವಿನ ಭಯವುಂಟೇ?
ಸತ್ಯ ಜ್ಞಾನಿಗೆ ಅಜ್ಞಾನದ ಭಯವುಂಟೇ?
ವಾತ ಪಿತ್ತ ಶ್ಲೇಷ್ಮ ನಷ್ಟವಾದವಂಗೆ
ತಾಪತ್ರಯಾದಿಗಳ ಭಯವುಂಟೇ?
ಸ್ವಯಂಜ್ಯೋತಿಯ ಬೆಳಗನುಳ್ಳಾತನು
ಚಂದ್ರಸೂರ್ಯಾದಿಗಳ ಬೆಳಗನಾಶ್ರಯಿಸುವನೆ?
ನಿಜದಿಂದ ತನ್ನ ತಾನರಿದು, ತಾನು ತಾನಾದಾತನು,
ಮಾಯದ ಗಜಬಜೆಯ ಹುಸಿಗೆ ಬೆದರುವನೆ ಮಹಾಶರಣನು?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Nitya tr̥ptanige hasivina bhayavuṇṭē?
Satya jñānige ajñānada bhayavuṇṭē?
Vāta pitta ślēṣma naṣṭavādavaṅge
tāpatrayādigaḷa bhayavuṇṭē?
Svayan̄jyōtiya beḷaganuḷḷātanu
candrasūryādigaḷa beḷaganāśrayisuvane?
Nijadinda tanna tānaridu, tānu tānādātanu,
māyada gajabajeya husige bedaruvane mahāśaraṇanu?
Mahāliṅgaguru śivasid'dhēśvara prabhuvē.