Index   ವಚನ - 690    Search  
 
ಸವಿಕಲ್ಪ ಸತ್ತಿತ್ತು, ನಿರ್ವಿಕಲ್ಪವೆಂಬ ಗರ್ವವಳಿದು, ತೆರಹಿಲ್ಲದ ಮಹಾಘನದೊಳಡಗಿತ್ತಾಗಿ. ಸಾಧ್ಯವಿಲ್ಲ, ಸಾಧಕನಿಲ್ಲ;ಪೂಜ್ಯನಿಲ್ಲ, ಪೂಜಕನಿಲ್ಲ; ದೇವನಿಲ್ಲ, ಭಕ್ತನಿಲ್ಲ.ಇವೇನುಯೇನೂ ಇಲ್ಲವಾಗಿ ನಾಮನಲ್ಲ, ನಿರ್ನಾಮನಲ್ಲ;ಸೀಮನಲ್ಲ, ನಿಸ್ಸೀಮನಲ್ಲ; ಇವೇನುಯೇನೂ ಇಲ್ಲದ ಸರ್ವಶೂನ್ಯನಿರಾಲಂಬವು, ನಿರ್ವಯಲು ನಿರಾಕಾರ ಪರವಸ್ತು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.