Index   ವಚನ - 689    Search  
 
ನಿಶ್ಚಲನೆಂಬ ನಿರ್ದೇಹಿಯ ಮೇಲೆ ಸಚ್ಚಿದಾನಂದವೆಂಬ ಪರವು ಬಂದೆರಗಿಯೆಯ್ದಿ ಎಯ್ದೆ ನುಂಗಿತ್ತು ನೋಡಾ. ಎಯ್ದಿ ನುಂಗಲಾಗಿ ಕಾರ್ಯನೆನಲಿಲ್ಲ; ಕಾರಣನೆನಲಿಲ್ಲ; ಪರಮ ಕಾರಣನೆನಲಿಲ್ಲ; ಜೀವ ಪರಮರೈಕ್ಯವನೊಳಕೊಂಡು ತೀವಿ ಪರಿಪೂರ್ಣ ಪರಾಪರನೆನಲಿಲ್ಲ. ಲಕ್ಷ್ಯನೆನಲಿಲ್ಲ; ನಿರ್ಲಕ್ಷ್ಯನೆನಲಿಲ್ಲ; ಅಲಕ್ಷ್ಯಯನ ಅದ್ವಯನ. ಶೂನ್ಯನೆನಲಿಲ್ಲ; ನಿಶ್ಯೂನ್ಯನೆಲಿಲ್ಲ; ಮಹಾಶೂನ್ಯನೆನಲಿಲ್ಲ. ಏನು ಏನೂ ಎನಲಿಲ್ಲ. ನಿರಾಕಾರ ಬಯಲು ನಿಶ್ಯಬ್ದಮಯವಾದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆಂಬ ನಾಮ ರೂಪು ಕ್ರೀಗಳು ನಷ್ಟವಾದ ಕಾರಣ ಏನೂ ಎನಲಿಲ್ಲ ನೋಡಾ.