Index   ವಚನ - 701    Search  
 
ಭಕ್ತಿಸ್ಥಲ ಮಾಹೇಶ್ವರಸ್ಥಲದಲ್ಲಿ ಅಡಗಿ, ಮಾಹೇಶ್ವರಸ್ಥಲ ಪ್ರಸಾದಿಸ್ಥಲದಲ್ಲಡಗಿ, ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲದಲ್ಲಡಗಿ, ಪ್ರಾಣಲಿಂಗಿಸ್ಥಲ ಶರಣಸ್ಥಲದಲ್ಲಡಗಿ, ಶರಣಸ್ಥಲ ಐಕ್ಯಸ್ಥಲದಲ್ಲಡಗಿ, ಇಂತೀಷಡಂಗಯೋಗ ಸಮರಸವಾಗಿ ಷಡುಸ್ಥಲವ ಮೀರಿ ನಿರವಯಸ್ಥಲವನೆಯ್ದಿ, ಆ ನಿರವಯಸ್ಥಲ ನಿರಾಳದಲ್ಲಡಗಿ, ಆ ನಿರಾಳ ನಿತ್ಯನಿರಂಜನ ಪರವಸ್ತು ತಾನಾಯಿತ್ತಾಗಿ, ಕ್ರಿಯಾನಿಷ್ಪತ್ತಿ ಜ್ಞಾನನಿಷ್ಪತ್ತಿ ಭಾವನಿಷ್ಪತ್ತಿ, ಮಾಡುವ ಕ್ರೀಗಳೆಲ್ಲಾ ನಿಷ್ಪತ್ತಿಯಾಗಿ, ಅರಿವ ಅರುಹೆಲ್ಲಾ ಅಡಗಿ, ಭಾವಿಸುವ ಭಾವವೆಲ್ಲ ನಿರ್ಭಾವವಾಗಿ, ನಿರ್ಲೇಪಕ ನಿರಂಜನ ವಸ್ತು ತಾನು ತಾನಾದಲ್ಲದೆ, ಧ್ಯಾನಿಸಲಿಕೇನೂ ಇಲ್ಲ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ, ಷಟ್ ಸ್ಥಲಜ್ಞಾನಸಾರಾಯ ಸ್ವರೂಪನೆಂದು ಹೇಳಲ್ಪಟ್ಟನು.