Index   ವಚನ - 6    Search  
 
ತಲೆ ಕೆಚ್ಚಲು, ಮೊಲೆ ನಾಲಗೆಯಾಗಿ ಕೊಂಬೂರಿ ನಡೆದು, ಬೀದಿಗರುವಾಯಿತ್ತು ಕಪಿಲೆ! ಇದ ಕರೆದುಣಲರಿಯದೆ ಮರುಗುತ್ತಲೈದಾರೆ! ಇದನೇನೆಂಬೆ, ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗವೆ!