Index   ವಚನ - 51    Search  
 
ಧ್ಯಾನವಿಲ್ಲದೆ ಲಿಂಗವ ನಿಧಾನಿಸಬಹುದೆ? ಲಿಂಗವಿಲ್ಲದೆ ಧ್ಯಾನಕ್ಕೆ ಸಂಗ ಸನ್ಮತವುಂಟೆ? ಈ ಗುಣ ಶ್ರುತ ದೃಷ್ಟ ಕೂಡಿ ಅನುಮಾನಕ್ಕೆ ಒಳಗಾದಂತೆ. ಈ ಗುಣ ಅಂಗಲಿಂಗ ಆತ್ಮಲಿಂಗ ಸಂಗ ಸುಸಂಗಿಯ ಸಂಗ, ಉಭಯಸ್ಥಲ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.