Index   ವಚನ - 54    Search  
 
ನೋಡುವರೆಲ್ಲರು ಆಡಬಲ್ಲರೆ? ಮಾತನಾಡುವರೆಲ್ಲರು ಲಿಂಗಾಂಗಯೋಗ ಬಲ್ಲರೆ? ಸಾಧನೆಯ ಮಾಡುವ ಬಾಲರೆಲ್ಲರೂ ಕಳನಹೊಕ್ಕು ಕಾದಬಲ್ಲರೆ? ಈ ಮಾತಿನ ಮಾಲೆಯ ಸಂಸಾರದ ತೂತ ಯೋಗಿಗಳೆಲ್ಲರೂ ಲಿಂಗಾಂಗ ನಿಹಿತ ಯೋಗವ ಬಲ್ಲರೆ? ಶಂಭುವಿನಿಂದಿತ್ತ ಸ್ವಯಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.