Index   ವಚನ - 79    Search  
 
ಯೋಗವೆಂಬುದೇನು ಲಕ್ಷ್ಯದೊಳಗೆ ಅಲಕ್ಷ್ಯವಡಗಿಪ್ಪುದು; ಇಷ್ಟದಲ್ಲಿ ಅಭೀಷ್ಟವಡಗಿಪ್ಪುದು; ಸ್ಥೂಲದಲ್ಲಿ ಸೂಕ್ಷ್ಮವಡಗಿಪ್ಪುದು; ಅರಿದಲ್ಲಿ ಆ ಅರಿಕೆ ಅಡಗಿಪ್ಪುದು, ವಸ್ತುಕದಲ್ಲಿ ಆ ವಸ್ತು ಅಡಗಿ, ರಂಜನೆಯಲ್ಲಿ ನಿರಂಜನ ಕುರುಹುಗೊಂಡು. ಆ ರಂಜನೆ ರಂಜಿಸುವಂತೆ, ತಾನರಿವ ಕುರುಹಿನಲ್ಲಿ ನಿಜದರಿವು ಕರಿಗೊಂಡು ಇಷ್ಟಲಿಂಗಕ್ಕೆ ದೃಷ್ಟಾತ್ಮಲೇಪವಾಗಿ ಇದು ಕ್ರಿಯಾ ಲಿಂಗಾಂಗಯೋಗ. ನಿಜವನರಿಯದೆ ಕುಟಿಲ ಘಟಂಗಳಿಂದ ಅಂಬಿಕಾ ಹಠ ಘಟಯೋಗಿಗಳೆಲ್ಲರು ಭವಸಾಗರದ ಸಟೆಯೋಗಿಗಳು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.