Index   ವಚನ - 96    Search  
 
ಸುಗಂಧದ ಅಂಗವಿದ್ದು ಕರಂಡದಲ್ಲಿ ಬಂಧಿಸಲಿಕ್ಕಾಗಿ, ಗಂಧ ನಿಂದಿತ್ತಲ್ಲದೆ, ವಾಯುವಿನ ಕೈಯ ಗಂಧವ ಕರಂಡದಲ್ಲಿ ಕೂಡಿ ಮುಚ್ಚಲಿಕ್ಕೆ ನಿಂದುದುಂಟೆ ಆ ಸುವಾಸನೆ? ಈ ಗುಣ ಲಿಂಗಾಂಗಿಯ ಸಂಗದ ಇರವು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.