Index   ವಚನ - 25    Search  
 
ಮನವೆಂಬ ಮಾಯೋಚ್ಫಿಷ್ಟವದು ಸಂಸಾರ ಕುಳಿಯೊಳು ಬಿದ್ದು ಹೊರಳುವ ಇರುಳುಗಳ್ಳ ಮರುಳಮಾನವರಿಗೆತ್ತಣ ಮಾತಯ್ಯಾ. ನಿಮ್ಮ ಮಹಾನುಭಾವರ ಸುಜ್ಞಾನಕ್ರಿಯೆಯೆತ್ತ, ಭವದ ಬೆಳೆಯೆತ್ತ? ನಿರಂಜನ ಚನ್ನಬಸವಲಿಂಗಾ, ನಿಮ್ಮ ನಿರವಯ ನಿಜಸಮಾಧಿಯೆತ್ತ, ವೈತರಣಿ ದುರ್ಗತಿಗಳೆತ್ತ?