Index   ವಚನ - 26    Search  
 
ಮನದಾಸೆಯೆಂಬ ಮಾಯೆ ಲೋಕರ ಮೀಸೆಯ ಹಿಡಿದು ನುಂಗಲು ಭಾಷೆ ಸತ್ತು ಕಾಸುಕಪ್ಪಟದಿ ಪರದ್ರವ್ಯಕ್ಕೆ ಜಿನುಜಿನುಗಿ ಮೋಸವಾಗಿ ಹೋದವರನೇಕ ಜನ. ಕುಚ ನಯನ ಸಂಪುಳ್ಳ ಬಾಲೆಯರ ಕಾಲಸಂದಿಗೆ ಮೋಹಿಸಿ ಬಚ್ಚಲದೊಳಗೆ ಬಿದ್ದು ಎಚ್ಚರದಪ್ಪಿ ಹೋದರನೇಕ. ಗೃಹ, ಕ್ಷೇತ್ರ, ಸೀಮೆಗಿಚ್ಫೈಸಿ ಹೊಡೆದಾಡಿ ಹೊಲಬುಗಾಣದೆ ಬಲೆಯೊಳು ಬಿದ್ದು ಹೋದರನೇಕ. ಇಂತು ಆಶೆ, ಆಮಿಷ, ಬಯಲಭ್ರಾಂತದೊಳಗಿಪ್ಪ ಮಾಯಾಧೀನ ಮನುಜರು ನಿಮ್ಮ ನಿಜಭಕ್ತರ ಸುಜ್ಞಾನ ಪರಮವೈರಾಗ್ಯವೆಂಬ ಸುಖದಾಸೆ ಆಮಿಷವನವರೆತ್ತ ಬಲ್ಲರಯ್ಯಾ ನಿರಂಜನ ಚನ್ನಬಸವಲಿಂಗಾ!