Index   ವಚನ - 27    Search  
 
ಹುಸಿಯ ಆಶೆಯ ಹಿಡಿದು ನಡೆವ ಕಸಮಾನವರ ದೆಸೆದೆಸೆಗೆಳಸಿ ಕುಸಿಕುಸಿದು ಕೆಡಹುತ್ತಿಹುದು ನಿನ್ನ ಮಾಯೆ. ವಶಗತವನರಿದು ಹರಿದು ವಶಗತವಾಗುವರೆ ಆರಳವಲ್ಲ ನಿಮ್ಮಿಂದಲ್ಲದೆ ನಿರಂಜನ ಚನ್ನಬಸವಲಿಂಗಾ.