Index   ವಚನ - 28    Search  
 
ಹಸಿಯ ಜವ್ವನೆಯರ ರಸನೆಯ ನವೀನ ಚಾತುರ್ಯಕ್ಕಂಗ ಮನ ಭಾವವಿತ್ತು, ಆದಿ ಮಧ್ಯ ಅವಸಾನವ ಮರೆದು ಅತ್ತಿತ್ತ ಬಿದ್ದು ಬಳಲುವ ಕತ್ತೆ ನಾಯಿಯ ಕರ್ಮ ಭವಿಗಳಿಗಿನ್ನೆತ್ತಣ ಜ್ಞಾನವಯ್ಯಾ ನಿರಂಜನ ಚನ್ನಬಸವಲಿಂಗಾ?