ಹಡೆದ ಮಕ್ಕಳಕೂಡಿ ಹಾದರನಾಡುವ
ಹಾವಾಡಗಿತ್ತಿ ಹಾವನಾಡಿಸುವಲ್ಲಿ,
ನೋಡಬಂದ ನಾಡಜಾಣರ ನುಂಗಿ
ಉಗುಳುತ್ತಿರ್ದಳು ನೋಡಾ!
ಆ ಉಚ್ಫಿಷ್ಟದ ವಾಸನೆ ಮೂರು ಬಣ್ಣದೊಡೆಯರ ಸೋಂಕಿ
ನಾನು ನೀನೆಂಬ ನಡೆ ನುಡಿಯವರ ಕೆಡಬಡಿದು
ಎದೆಯನೊದೆಯುತ್ತಿದೆ ನೋಡಾ.
ಆದಿಯ ನಾರಿಯ ಭಾವದಿಂದಲ್ಲದೆ ಸಾಧಿಸುವರ ಕಂಡು
ಮರುಗುತಿರ್ದೆನು ಕಾಣಾ ನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Haḍeda makkaḷakūḍi hādaranāḍuva
hāvāḍagitti hāvanāḍisuvalli,
nōḍabanda nāḍajāṇara nuṅgi
uguḷuttirdaḷu nōḍā!
Ā ucphiṣṭada vāsane mūru baṇṇadoḍeyara sōṅki
nānu nīnemba naḍe nuḍiyavara keḍabaḍidu
edeyanodeyuttide nōḍā.
Ādiya nāriya bhāvadindallade sādhisuvara kaṇḍu
marugutirdenu kāṇā niran̄jana cannabasavaliṅgā.