Index   ವಚನ - 34    Search  
 
ನೋಡಿರೆ ನೋಡಿರೆ ಮಾಯೆಯ ಕುಟಿಲವನು ದೂಡಿರೆ ದೂಡಿರೆ ಸಂಸಾರ ಸರಸವನು. ಮಾಡಿರೆ ಮಾಡಿರೆ ಗುರುಪಾದ ಸೇವೆಯನು; ಬೇಡಿರೆ ಬೇಡಿರೆ ನಿಮ್ಮ ಸ್ವರೂಪವನು. ಆಡಿರೆ ಆಡಿರೆ ಸತಿ ಪತಿಯ ಸೊಂಪಿನಿಂದೆ; ಹಾಡಿರೆ ಹಾಡಿರೆ ಬಾಯಿಗೆ ಬಂದಂತೆ. ಕೂಡಿರೆ ಕೂಡಿರೆ ನಿರಂಜನ ಚನ್ನಬಸವಲಿಂಗವ ಬೇರೆ ಕಾಣದಂತೆ ಮುಮುಕ್ಷುಗಳಿರಾ.