Index   ವಚನ - 37    Search  
 
ಹಿಂದುರಾಯನ ದಂಡು ಇಂದು ಬಂದರೆ, ಕಂದುರಾಯನ ಕಡಿದುಕೊಂದರು. ಹಸ್ತಿಗಮನೆಯ ಹರಿದುಕೊಂಡರು, ಪುರದ ಜನರನುರುಹಿ ಕಾಲ ಬಲಕಡಿದು ನೂಂಕಿತ್ತು ಕೇಳಾ. ಕೋಟಿ ದ್ರವ್ಯವನೆತ್ತಿಕೊಂಡು ಹೋದರು. ನಿರಂಜನ ಚನ್ನಬಸವಲಿಂಗವಿಟ್ಟ ಕೋಲ ಸುಟ್ಟುಕೊಂಡರು.