Index   ವಚನ - 66    Search  
 
ಅಯ್ಯಾ, ಶ್ರೀಮಹಾವಿಭೂತಿಯಿಂದೆ ಎನ್ನ ಕರ್ಮದ ಕತ್ತಲೆಯ ಕಳೆದು ನಿರ್ಮಲಾಂಗನೆಂದೆನಿಸಿದೆ ನೋಡಾ. ಅಯ್ಯಾ, ಶ್ರೀಮಹಾವಿಭೂತಿಯಿಂದೆ ಎನ್ನ ಇಂದ್ರಿಯಗಮನವಳಿದು ನಿರ್ಗಮನಿಯಾಗಿ ನಿಜಜಂಗಮವೆನಿಸಿದೆ ನೋಡಾ. ಅಯ್ಯಾ, ಶ್ರೀಮಹಾವಿಭೂತಿಯಿಂದೆ ಎನ್ನ ಕರಣವೃತ್ತಿಜ್ಞಾನವಳಿದು ನಿಜ ಜ್ಞಾನವೆಂದೆನಿಸಿದೆ ನೋಡಾ. ಅಯ್ಯಾ, ಶ್ರೀಮಹಾವಿಭೂತಿಯಿಂದೆ ಸಕಲ ವಿಷಯಮೋಹಂಗಳಳಿದು ನಿರ್ವಿಷಯ ನಿಜಮೋಹಿಯೆಂದೆನಿಸಿದೆ ನೋಡಾ. ಅಯ್ಯಾ, ಶ್ರೀಮಹಾವಿಭೂತಿಯಿಂದೆ ಅಪ್ರತಿಮ ಶರಣನೆಂದೆನಿಸಿದೆ ನೋಡಾ. ನಿರಂಜನ ಚನ್ನಬಸವಲಿಂಗದವಿರಳ ಪ್ರಕಾಶವೆಂಬ ಶ್ರೀಮಹಾವಿಭೂತಿಯಿಂದೆ ಸದ್ಯೋನ್ಮುಕ್ತನೆಂದೆನಿಸಿದೆ ನೋಡ.