Index   ವಚನ - 81    Search  
 
ಮೇರುವ ಮಣಿಸಂಬಂಧ ರುದ್ರಾಕ್ಷಿ, ಸರ್ಪಿನ ತಲೆ ಬಾಲ ತಿರುಹಿ ಕಟ್ಟಿ ಬಂದ ರುದ್ರಾಕ್ಷಿ, ನಾರಾಯಣನಂಬುಮಾಡಿ ಬಂದ ರುದ್ರಾಕ್ಷಿ, ಬ್ರಹ್ಮನ ಸಾರಥಿಯನ್ನಿಡಬಂದ ರುದ್ರಾಕ್ಷಿ, ತ್ರಿಪುರವ ಸಂಹರಿಸಿಬಂದ ರುದ್ರಾಕ್ಷಿ, ಶಿವ ನಿರೀಕ್ಷಿಸಿ ಬಂದ ಪರಮರುದ್ರಾಕ್ಷಿಯನು ಎನ್ನ ಸರ್ವಾಂಗದಲ್ಲಿ ಧರಿಸಿ ನಿರಂಜನ ಚನ್ನಬಸವಲಿಂಗಕೆ ಶರಣು ಶರಣೆನುತಿರ್ದೆನು.