Index   ವಚನ - 91    Search  
 
ಗುರುವಿನಿಂದುದಯವಾಗಿ ಕರಸ್ಥಲಕ್ಕೆ ಲಿಂಗವ ಪಡೆದು, ಕರ್ಣದಲ್ಲಿ ಪರಮಪಂಚಾಕ್ಷರವ ತುಂಬಿ, ಮುಖದಲ್ಲಿ ಉಚ್ಚರಿಸಿದ ಬಳಿಕ, ಮಂತ್ರಮೂರ್ತಿಯಾಗಿರಬೇಕಲ್ಲದೆ, ಹುಸಿ, ದಿಟ, ರುಚಿ, ಅರುಚಿ, ಕುಯುಕ್ತವಾಕ್ಕು ದೋಷವರ್ತನೆಯುಳ್ಳಡೆ ಅಷ್ಟಾವರಣ ಪಂಚಾಚಾರಕ್ಕೆ ವಿಹೀನವಾಗಿ ಅಧೋಗತಿಗಿಳಿವನು ನಿರಂಜನ ಚನ್ನಬಸವಲಿಂಗವನರಿಯದೆ.