Index   ವಚನ - 101    Search  
 
ಅಯ್ಯಾ, ನಿನ್ನ ನಾಮಧ್ಯಾನಸುಖದಿಂದೆ ಮತ್ತೇನು ಅರಿಯೆನಯ್ಯಾ. ಅದೇನು ಕಾರಣವೆಂದಡೆ, ಎನ್ನ ಹೃದಯದಲ್ಲಿ ನೆಲೆಸಿರ್ದು ಸಕಲನಿಃಕಲದಲ್ಲಿ ಮಹದೈಶ್ವರ್ಯವಾಗಿ ಆನಂದಪ್ರಕಾಶಮಯವಾಗಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ತೆರಹಿಲ್ಲದೆ ಪರಿಣಾಮವ ತೋರುತಿರ್ಪುದು.