ತನು ಇಂಪುಗೊಂಡು ಮನ ಭಾವ
ಬೆಚ್ಚಿ ಮುಂದುವರಿದು ಮಾಡಲು
ಭಕ್ತಿರಸ ಮನ ಸೊಂಪುಗೊಂಡು
ಭಾವ ತನು ಕರಗಿ ಮಚ್ಚುಗೊಂಡು ಮಾಡಲು
ಭಕ್ತಿಯ ಮಧುರಭಾವ ತರಹರಗೊಂಡು
ತನು ಮನ ತುಂಬಿ ಕಂಗಳರತಿ ಕಡೆಗುಕ್ಕಿಮಾಡಲು ಭಕ್ತಿಯ ಸೌಖ್ಯ.
ಇಂತು ಶ್ರದ್ಧೆ ಸಾವಧಾನಾನಂದವೆಂತೆಂಬ
ಭಕ್ತಿತ್ರಯದ ಬೆಳೆಯೊಳಗೊಪ್ಪುತಿರ್ದ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಭಕ್ತ.
Art
Manuscript
Music
Courtesy:
Transliteration
Tanu impugoṇḍu mana bhāva
becci munduvaridu māḍalu
bhaktirasa mana sompugoṇḍu
bhāva tanu karagi maccugoṇḍu māḍalu
bhaktiya madhurabhāva taraharagoṇḍu
tanu mana tumbi kaṅgaḷarati kaḍegukkimāḍalu bhaktiya saukhya.
Intu śrad'dhe sāvadhānānandaventemba
bhaktitrayada beḷeyoḷagopputirda
guruniran̄jana cannabasavaliṅgā nim'ma bhakta.