ಅಯ್ಯಾ, ನಿಮ್ಮ ಶರಣರೆನಗೆ ಭಕ್ತಿಯಿಲ್ಲೆಂಬುವರು
ಅದು ದಿಟವೆಂಬುದೇ ನಿಷ್ಠೆ:
ದ್ವೈತಾದ್ವೈತ ಯೋಗ ಮಾರ್ಗಿಗಳಲ್ಲಿ.
ಅಯ್ಯಾ, ನಿಮ್ಮ ಪ್ರಮಥರೆನಗೆ ಜ್ಞಾನವಿಲ್ಲೆಂಬುವರು.
ಅದು ಸಹಜವೆಂಬುದೇ ನಿಷ್ಠೆ
ಅನಿತ್ಯ ನಿತ್ಯವೆಂಬುವ ಮನದಲ್ಲಿ.
ಅಯ್ಯಾ, ನಿಮ್ಮ ಭಕ್ತರು ಎನಗೆ ವೈರಾಗ್ಯವಿಲ್ಲೆಂಬುವರು
ಅದು ಬದ್ಧವೆಂಬುದೇ ನಿಷ್ಠೆ:
ತನ್ನ ಸತ್ಕ್ರಿಯಾನುಕೂಲೆಯಾದ ಸತಿಸುತಾಲಯಂಗಳಲ್ಲಿ.
ಅಯ್ಯಾ, ನಿಮ್ಮ ಶರಣರಿದು ಸತ್ಯವೆಂಬುವರು,
ಅದು ನಿತ್ಯವೆಂಬುದೆ ನಿಷ್ಠೆ:
ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಂದಂತಿಪ್ಪುದು.