Index   ವಚನ - 131    Search  
 
ಸತ್ಯಕಾಯಕದಿಂದುಲಿದು ಬಂದ ಧನವನು, ಮಿಥ್ಯವರಿಯದೆ ಚಿತ್ತಾದಿಕರಣಗೊತ್ತಿನೊಳು ನಿಲಿಸಿ, ಗುರುಲಿಂಗಜಂಗಮವನರಿದು, ಸ್ವಯ ಪರವಳಿದುಳಿದಿತ್ತು ಮರೆದಿರಬಲ್ಲ ಪರಮನಿಷ್ಠಾಂಗವಾದ ಭಕ್ತನಲ್ಲಿ ನಿರಂತರ ಗುರುನಿರಂಜನ ಚನ್ನಬಸವಲಿಂಗ.