ಸತ್ಯಕಾಯಕದಿಂದುಲಿದು ಬಂದ ಧನವನು,
ಮಿಥ್ಯವರಿಯದೆ ಚಿತ್ತಾದಿಕರಣಗೊತ್ತಿನೊಳು ನಿಲಿಸಿ,
ಗುರುಲಿಂಗಜಂಗಮವನರಿದು,
ಸ್ವಯ ಪರವಳಿದುಳಿದಿತ್ತು ಮರೆದಿರಬಲ್ಲ
ಪರಮನಿಷ್ಠಾಂಗವಾದ ಭಕ್ತನಲ್ಲಿ
ನಿರಂತರ ಗುರುನಿರಂಜನ ಚನ್ನಬಸವಲಿಂಗ.
Art
Manuscript
Music
Courtesy:
Transliteration
Satyakāyakadindulidu banda dhanavanu,
mithyavariyade cittādikaraṇagottinoḷu nilisi,
guruliṅgajaṅgamavanaridu,
svaya paravaḷiduḷidittu marediraballa
paramaniṣṭhāṅgavāda bhaktanalli
nirantara guruniran̄jana cannabasavaliṅga.