Index   ವಚನ - 130    Search  
 
ಅಯ್ಯಾ, ನಿಮ್ಮ ಶರಣರೆನಗೆ ಭಕ್ತಿಯಿಲ್ಲೆಂಬುವರು ಅದು ದಿಟವೆಂಬುದೇ ನಿಷ್ಠೆ: ದ್ವೈತಾದ್ವೈತ ಯೋಗ ಮಾರ್ಗಿಗಳಲ್ಲಿ. ಅಯ್ಯಾ, ನಿಮ್ಮ ಪ್ರಮಥರೆನಗೆ ಜ್ಞಾನವಿಲ್ಲೆಂಬುವರು. ಅದು ಸಹಜವೆಂಬುದೇ ನಿಷ್ಠೆ ಅನಿತ್ಯ ನಿತ್ಯವೆಂಬುವ ಮನದಲ್ಲಿ. ಅಯ್ಯಾ, ನಿಮ್ಮ ಭಕ್ತರು ಎನಗೆ ವೈರಾಗ್ಯವಿಲ್ಲೆಂಬುವರು ಅದು ಬದ್ಧವೆಂಬುದೇ ನಿಷ್ಠೆ: ತನ್ನ ಸತ್ಕ್ರಿಯಾನುಕೂಲೆಯಾದ ಸತಿಸುತಾಲಯಂಗಳಲ್ಲಿ. ಅಯ್ಯಾ, ನಿಮ್ಮ ಶರಣರಿದು ಸತ್ಯವೆಂಬುವರು, ಅದು ನಿತ್ಯವೆಂಬುದೆ ನಿಷ್ಠೆ: ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಂದಂತಿಪ್ಪುದು.