ಭಿನ್ನವಿಲ್ಲದೆ ಶರಣೆಂಬೀ ಚನ್ನಭಕ್ತರು ಎನ್ನರಸುತ್ತ ಬಂದರೆ
ಬೆನ್ನ ಹತ್ತಿ ಬಂದ ಎನ್ನಯ್ಯ ಸಾಕ್ಷಿಯಾಗಿ.
ಎಲ್ಲವೂ ನಿಮ್ಮದೆಂಬೆಯೆಂದಲ್ಲಿ ವಂಚನೆಯುಳ್ಳರೆ
ಬಂಧನ ಬಪ್ಪುದು ತಪ್ಪದು.
ಅಂದಂದಿನ ಮಾತು ಇಂದುಳಿವನಲ್ಲ,
ಸಂದುಸಂಶಯ ನಿಂದುರುಹಿದ ನಿಷ್ಠೆಯೆನಗುಂಟು
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Bhinnavillade śaraṇembī cannabhaktaru ennarasutta bandare
benna hatti banda ennayya sākṣiyāgi.
Ellavū nim'madembeyendalli van̄caneyuḷḷare
bandhana bappudu tappadu.
Andandina mātu induḷivanalla,
sandusanśaya ninduruhida niṣṭheyenaguṇṭu
guruniran̄jana cannabasavaliṅgadalli.