Index   ವಚನ - 139    Search  
 
ಸಂವಿತ್‍ಪ್ರಭಾನಂದ ಚರಲಿಂಗಮೂರ್ತಿಯೇ ನಿನಗೆ ಕೊಟ್ಟುಕೊಳ್ಳೆನೆಂಬ ಭಾಷೆಯೆನಗುಂಟು. ನಿಮ್ಮ ಮಹಾಶರಣರ ವಚನವುಂಟು. ಆನು ಪೂರ್ವಭಾಗಿಯಲ್ಲಯ್ಯ. ಅಯ್ಯಾ, ನಿಮಗೆ ಕೊಟ್ಟು ಕೊಳ್ಳಬೇಕೆಂಬ ಭಾವಯೆನಗುಂಟು. ನಿಮ್ಮ ಹರಶರಣರೈಕ್ಯವುಂಟು. ಆನು ಉತ್ತರಭಾಗಿಯಯ್ಯಾ ಗತಿಮತಿಯುಳ್ಳನ್ನಕ್ಕರ ಆನು ನೀನು ಗುರುನಿರಂಜನ ಚನ್ನಬಸವಲಿಂಗಾ.