Index   ವಚನ - 187    Search  
 
ಅತ್ತಿತ್ತರಿಯದವಳ ಚಿತ್ತ ಸತ್ಯವೆಂದು ಕಾಣಯ್ಯಾ. ಹಿಂದೆ ಮುಂದೆ ತಂದು ನಿಂದವಳ ಚಂದ ನಿಮಗಂದವಾಯಿತ್ತಯ್ಯಾ. ಬಂದ ಬಂದೊಲುಮೆಯನೊಂದು ತೋರದೆ ಇಂದು ಕೊಳ್ಳಾ, ಮುಂದೆನಗೆ ಸಮರಸದ ಕಲೆಯಿತ್ತು ಕೂಡಾ ಗುರುನಿರಂಜನ ಚನ್ನಬಸವಲಿಂಗಾ.