Index   ವಚನ - 229    Search  
 
ಸಗುಣ ನಿರ್ಗುಣಸನ್ನಿಹಿತ ವೀರಮಾಹೇಶ್ವರನು, ಜಡಮನುಜರಿಗೊಮ್ಮೆ ಕೈಯೆತ್ತಿ ಬೇಡುವನಲ್ಲ ಉಚ್ಫಿಷ್ಟವಾಯಿತ್ತೆಂದು. ಹೆಂಗಳೆಯರ ನೋಡಿ ಕಾಮಿಸುವನಲ್ಲ ಕಂಗಳಮೀಸಲು ಕೆಟ್ಟೀತೆಂದು, ಲಿಂಗಜಂಗಮವನರ್ಚಿಸಿ ಹಂಗಿನೊಳಗಿಲ್ಲ ಭವದ ನಿಲುವೆಂದು ಗುರುನಿರಂಜನ ಚನ್ನಬಸವಲಿಂಗದ ಬಿರುದಿನ ಪತಾಕೆಯು.