ಸಂಗವನರಿದು ಜರೆದು ಸಂಗಸಂಬಂಧವಾದ
ಚಿನುಮಯ ಚನ್ನಮಹೇಶ್ವರನ
ತನುಮನಭಾವಂಗಳು ಮತ್ತೊಂದಕ್ಕೆ ಆಸ್ಪದವಿರಹಿತವಾಗಿರ್ದವು.
ಅದೆಂತೆಂದೊಡೆ, ಗುರುಭಕ್ತಿಸೇವಾನುಕೂಲಿ
ಕಾಯದ ಗತಿಯುಳ್ಳನ್ನಕ್ಕರ ಕಂಡು ಮಾಡಿ
ವಿನೋದಿಸಬೇಕೆಂಬುದೊಂದು ನಿರುತ,
ಮಂತ್ರ ಧ್ಯಾನ ಜಪ ಸ್ತೋತ್ರಾದಿಗಳಿಂದೆ
ಲಿಂಗಾರ್ಚನೆಯವಸರ ಮನವುಳ್ಳನ್ನಕ್ಕರ
ಮಾಡಿ ನೋಡಿ ಆನಂದಿಸಬೇಕೆಂಬುದೊಂದು ನಿಷ್ಠೆ.
ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಾರಾಧನೆ
ಪ್ರಾಣಾದಿ ದ್ರವ್ಯವುಳ್ಳನ್ನಕ್ಕರ
ಮಾಡಿ ನೀಡಿ ಸುಖಿಸಬೇಕೆಂಬುದೊಂದು ಭಾವದ ನಿರುತ.
ಇಂತು ತ್ರಿವಿಧ ಪದದಲ್ಲಿ ತ್ರಿವಿಧ ವಿದ್ಯಾಸನ್ನಿಹಿತನಾಗಿ
ಎಡೆದೆರಹಿಲ್ಲದಿರುತಿರ್ದನು ಗುರುನಿರಂಜನ ಚನ್ನಬಸವಲಿಂಗನಲ್ಲಿ.
Art
Manuscript
Music
Courtesy:
Transliteration
Saṅgavanaridu jaredu saṅgasambandhavāda
cinumaya cannamahēśvarana
tanumanabhāvaṅgaḷu mattondakke āspadavirahitavāgirdavu.
Adentendoḍe, gurubhaktisēvānukūli
kāyada gatiyuḷḷannakkara kaṇḍu māḍi
vinōdisabēkembudondu niruta,
mantra dhyāna japa stōtrādigaḷinde Liṅgārcaneyavasara manavuḷḷannakkara
māḍi nōḍi ānandisabēkembudondu niṣṭhe.
Anna vastra ābharaṇādi hadineṇṭu terada bhaktiyārādhane
prāṇādi dravyavuḷḷannakkara
māḍi nīḍi sukhisabēkembudondu bhāvada niruta.
Intu trividha padadalli trividha vidyāsannihitanāgi
eḍederahilladirutirdanu guruniran̄jana cannabasavaliṅganalli.