ಗಂಡಗಿಕ್ಕದೆ ಮಾಡಿ ತಪ್ಪಿಸಿ ತಿಂಬ ದಿಂಡೆಹೆಂಗಳೆಯಂತೆ
ಕರ್ತುಗಳಿಗೆ ಅರ್ಥವ ಸವೆಯದೆ
ಸಟೆವೆರೆದು ಬಾಳುವ ಕುಟಿಲಗಳ್ಳರಿಗೆಂತಪ್ಪುದಯ್ಯಾ ಭಕ್ತಿ?
ಸತ್ಯ ಧನವ ನಿತ್ಯ ನಿತ್ಯವರಿದು ಮರೆದಿತ್ತಡೆ
ಕರ್ತುವೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Gaṇḍagikkade māḍi tappisi timba diṇḍ'̔eheṅgaḷeyante
kartugaḷige arthava saveyade
saṭeveredu bāḷuva kuṭilagaḷḷarigentappudayyā bhakti?
Satya dhanava nitya nityavaridu maredittaḍe
kartuvoliva nam'ma guruniran̄jana cannabasavaliṅgā.
ಸ್ಥಲ -
ಮಾಹೇಶ್ವರನ ಭಕ್ತಸ್ಥಲ