Index   ವಚನ - 276    Search  
 
ಪರಧನ ಪರಸ್ತ್ರೀ ಪರನಿಂದೆ ಪರದೈವ ಅನೃತಾದಿ ಪಂಚಮಹಾಪಾತಕವ ಪರಿಹರಿಸದನ್ನಕ್ಕರ ವೀರಮಾಹೇಶ್ವರನೆಂತಪ್ಪನಯ್ಯಾ? ಸಂಚಿತಾದಿ ಕರ್ಮತ್ರಯದೊಳಿರ್ದು ಕೆಂಚ, ಧವಲಕ್ಕಜಲವರ್ತಕವಳಿಯದೆ ವೀರಮಾಹೇಶ್ವರನಾದೆನೆಂದರೆ ಅಸಾಧ್ಯ ಕಾಣಾ ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.