Index   ವಚನ - 277    Search  
 
ಅಂಗ ಆಚಾರಂಗವಾಗದನ್ನಕ್ಕರ, ಮನಸು ಉನ್ಮನಸಾಗದನ್ನಕ್ಕರ, ಪ್ರಾಣ ಚಿತ್ಪ್ರಾಣವಾಗದನ್ನಕ್ಕರ, ಭಾವ ಮಹಾನುಭಾವವಾಗದನ್ನಕ್ಕರ, ಜೀವ ಸಜ್ಜೀವವಾಗದನ್ನಕ್ಕರ, ಇಹಪರಕಾಂಕ್ಷೆ ಅಳಿಯದನ್ನಕ್ಕರ, ಎಂತು ಮಾಹೇಶ್ವರನಪ್ಪನಯ್ಯಾ? ಕಾಯದಲ್ಲಿ ಗುರುಭಕ್ತಿ ಕಾಣದನ್ನಕ್ಕರ, ಮನದಲ್ಲಿ ಲಿಂಗಭಕ್ತಿ ಕಾಣದನ್ನಕ್ಕರ, ಪ್ರಾಣದಲ್ಲಿ ಜಂಗಮಭಕ್ತಿ ಕಾಣದನ್ನಕ್ಕರ, ಭಾವದಲ್ಲಿ ಪ್ರಸಾದಭಕ್ತಿ ಕಾಣದನ್ನಕ್ಕರ ಎಂತು ಮಾಹೇಶ್ವರನಪ್ಪನಯ್ಯಾ? ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣರ ಸಂಗವಿಲ್ಲದನ್ನಕ್ಕರ ಎಂತು ಮಾಹೇಶ್ವರನಪ್ಪನಯ್ಯಾ?