Index   ವಚನ - 304    Search  
 
ಇಷ್ಟಲಿಂಗವನರಿಯದೆ ಕಷ್ಟದಿಂದೆ ಕಷ್ಟವ ಕಾಂಬ ಅಷ್ಟಾಂಗಬದ್ಧರು, ಮುಟ್ಟಿ ಮುಟ್ಟಿ ಮುಟ್ಟುವ ಶ್ರೇಷ್ಠಗತಿಗಳರಿಯಬಲ್ಲರೆ? ಮರಳಿ ಮರಳಿ ಹಗಲಿರುಳು ನೆರೆದಿರುವ ಬರಿ ಸಿರಿಸಂಪನ್ನರೆತ್ತ? ಇಂದು ರವಿ ಕಳೆಯಗಲದೆ ಕಂಡು ಸುಖಿಸುವ ಮಹಾನುಭಾವಿ ಮಹೇಶ್ವರನೆತ್ತ? ಗುರುನಿರಂಜನ ಚನ್ನಬಸವಲಿಂಗದಲ್ಲಿ.